ಕರ್ನಾಟಕ ವಿದ್ಯುತ್ ನಿಗಮ ಲಿಮಿಟೆಡ್ (KPCL) 04 ಸ್ಥಾನಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
KPCL Recruitment
ಆಸಕ್ತರಾಗಿರುವ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳು 26 ಡಿಸೆಂಬರ್ 2025 ರೊಳಗಾಗಿ ಆಫ್‌ಲೈನ್ ಅರ್ಜಿ ಸಲ್ಲಿಸಬೇಕು. ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ಅವಲೋಕನ :-
| ಸಂಸ್ಥೆಯ ಹೆಸರು | ಕರ್ನಾಟಕ ವಿದ್ಯುತ್ ನಿಗಮ ಲಿಮಿಟೆಡ್ (KPCL) |
| ಹುದ್ದೆಯ ಹೆಸರು | ವೈದ್ಯಕೀಯ ಅಧಿಕಾರಿ ಮತ್ತು ಖಾತೆ ಅಧಿಕಾರಿ (ಲೆಕ್ಕಪತ್ರ ಅಧಿಕಾರಿ) |
| ಒಟ್ಟು ಹುದ್ದೆಗಳು | 04 |
| ವೇತನ ಶ್ರೇಣಿ | ಅಧಿಸೂಚನೆಯನ್ನು ವೀಕ್ಷಿಸಿ |
| ಅರ್ಹತೆ | ಚಾರ್ಟರ್ಡ್ ಅಕೌಂಟೆಂಟ್ (CA) ಅಥವಾ ಐಸಿಡಬ್ಲ್ಯೂಎ (ICWA) ಪದವಿ. |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 26 ಡಿಸೆಂಬರ್ 2025 (ಸಂಜೆ 5:00) |
| ಅಧಿಕೃತ ಜಾಲತಾಣ | kpcl.karnataka.gov.in |
ವೇತನ ಶ್ರೇಣಿ :-
ಅದಿಕ್ರುತ ಅಧಿಸೂಚನೆಯನ್ನು ಓದಿರಿ
ಹುದ್ದೆಯ ವಿವರಣೆ :-
| ಹುದ್ದೆಯ ಹೆಸರು | ಒಟ್ಟು ಹುದ್ದೆಗಳು |
| ವೈದ್ಯಕೀಯ ಅಧಿಕಾರಿ-02 ವೈದ್ಯಕೀಯ ಅಧಿಕಾರಿ-01 ಖಾತೆ ಅಧಿಕಾರಿ (ಲೆಕ್ಕಪತ್ರ)-01 | 04 |
ವಿದ್ಯಾರ್ಹತೆ ವಿವರ :-
ಚಾರ್ಟರ್ಡ್ ಅಕೌಂಟೆಂಟ್ (CA) ಅಥವಾ ಐಸಿಡಬ್ಲ್ಯೂಎ (ICWA) ಪದವಿ.
ಅರ್ಜಿ ಶುಲ್ಕ :-
₹100/- (ನೂರು ರೂಪಾಯಿ ಮಾತ್ರ). ಈ ಶುಲ್ಕವನ್ನು ಮರುಪಾವತಿ ಮಾಡುವುದಿಲ್ಲ.
ಪಾವತಿ ವಿಧಾನ: ಬ್ಯಾಂಕ್ ವರ್ಗಾವಣೆ (NEFT/RTGS/IMPS) ಮಾಡಬೇಕು.
ಬ್ಯಾಂಕ್ ವಿವರಗಳು:- KPCL Recruitment
ಬೆನಿಫಿಷಿಯರಿ (ಲಾಭಾಂಶಿ): ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್
ಖಾತೆ ಸಂಖ್ಯೆ: 10503342643
IFSC ಕೋಡ್: SBIN0009077
ಬ್ಯಾಂಕ್ ಮತ್ತು ಶಾಖೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, IFB ಶಾಖೆ, ರೆಸಿಡೆನ್ಸಿ ರಸ್ತೆ, ಬೆಂಗಳೂರು-01
ವಯೋಮಿತಿ ವಿವರ :- KPCL Recruitment
ಅಭ್ಯರ್ಥಿಗಳ ವಯಸ್ಸು ಕರ್ನಾಟಕ ಸರ್ಕಾರದ ನೇಮಕಾತಿ ನಿಯಮಗಳಿಗೆ ಅನುಗುಣವಾಗಿರಬೇಕು.
ಆಯ್ಕೆ ಪ್ರಕ್ರಿಯೆ :- KPCL Recruitment
ಅರ್ಹತಾ ಪರೀಕ್ಷೆ: ಅರ್ಜಿದಾರರ ಅರ್ಹತೆಯನ್ನು (ಶಿಕ್ಷಣ, ವರ್ಗ, ಇತ್ಯಾದಿ) ಪರಿಶೀಲಿಸಲಾಗುತ್ತದೆ.
ದಾಖಲೆ ಪರಿಶೀಲನೆ: ಸಲ್ಲಿಸಿದ ಎಲ್ಲಾ ದಾಖಲೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತದೆ.
ಕನ್ನಡ ಭಾಷಾ ಪರೀಕ್ಷೆ: ಅನ್ವಯಿಸುವ ಸಂದರ್ಭಗಳಲ್ಲಿ, ಕನ್ನಡ ಭಾಷೆಯ ಜ್ಞಾನವನ್ನು ಪರೀಕ್ಷಿಸಬಹುದು.
ಲಿಖಿತ ಪರೀಕ್ಷೆ ಅಥವಾ ಸಂದರ್ಶನದ ಬಗ್ಗೆ ಪ್ರಸ್ತುತ ಅಧಿಸೂಚನೆಯಲ್ಲಿ ಉಲ್ಲೇಖವಿಲ್ಲ
ಅರ್ಜಿ ಸಲ್ಲಿಸುವ ವಿಧಾನ :- KPCL Recruitment
ಹಂತ 1: ಅರ್ಜಿ ಫಾರ್ಮ್ ಡೌನ್‌ಲೋಡ್ ಮಾಡಿ
KPCL ಅಧಿಕೃತ ವೆಬ್‌ಸೈಟ್ https://kpcl.karnataka.gov.in ಗೆ ಭೇಟಿ ನೀಡಿ.
“ನೇಮಕಾತಿ” ಅಥವಾ “ಕರಿಯರಿ” ವಿಭಾಗದಲ್ಲಿ ಬಿಡುಗಡೆಯಾದ ಅಧಿಸೂಚನೆಯ PDF ಫೈಲ್‌ನಲ್ಲಿ ಅರ್ಜಿ ಫಾರ್ಮ್ ಇರುತ್ತದೆ. ಅದನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್ ಮಾಡಿಕೊಳ್ಳಿ.
ಹಂತ 2: ಅರ್ಜಿ ಫಾರ್ಮ್ ಭರ್ತಿ ಮಾಡಿ
ನಿಮ್ಮ ವೈಯಕ್ತಿಕ, ಶೈಕ್ಷಣಿಕ ಮತ್ತು ಇತರೆ ವಿವರಗಳನ್ನು ಸ್ಪಷ್ಟವಾಗಿ ಮತ್ತು ಸರಿಯಾಗಿ ಭರ್ತಿ ಮಾಡಿ.
ಅರ್ಜಿ ಫಾರ್ಮ್‌ನ ಕೊನೆಯಲ್ಲಿ ನಿಮ್ಮ ಸಹಿ ಮತ್ತು ದಿನಾಂಕ ಹಾಕಲು ಮರೆಯಬೇಡಿ.
ಹಂತ 3: ದಾಖಲೆಗಳನ್ನು ಸಿದ್ಧಪಡಿಸಿ
ಈ ಕೆಳಗಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸ್ಪಷ್ಟವಾದ PDF/JPEG ಫೈಲ್‌ಗಳಾಗಿ ಸಿದ್ಧಪಡಿಸಿ:
ಭರ್ತಿ ಮಾಡಿದ ಮತ್ತು ಸಹಿ ಮಾಡಿದ ಅರ್ಜಿ ಫಾರ್ಮ್.
ಅರ್ಜಿ ಶುಲ್ಕದ ಬ್ಯಾಂಕ್ ರಶೀದಿ.
ಶೈಕ್ಷಣಿಕ ದಾಖಲೆಗಳು (ಮಾರ್ಕ್‌ಶೀಟ್‌ಗಳು, ಪದವಿ ಪ್ರಮಾಣಪತ್ರ).
ಜನ್ಮ ದಿನಾಂಕದ ಪುರಾವೆ (SSLC ಪ್ರಮಾಣಪತ್ರ).
ಜಾತಿ ಪ್ರಮಾಣಪತ್ರ.
ಕರ್ನಾಟಕ ವೈದ್ಯಕೀಯ ಮಂಡಳಿ ನೋಂದಣಿ ಪ್ರಮಾಣಪತ್ರ (ವೈದ್ಯಕೀಯ ಅಧಿಕಾರಿಗಳಿಗೆ).
CA/ICWA ಸದಸ್ಯತ್ವ ಪ್ರಮಾಣಪತ್ರ (ಖಾತೆ ಅಧಿಕಾರಿಗಳಿಗೆ).
ಅನುಭವ ಪ್ರಮಾಣಪತ್ರಗಳು (ಇದ್ದರೆ).
ಫೋಟೋ ಮತ್ತು ಸಹಿ.
ಹಂತ 4: ಎಲ್ಲವನ್ನೂ ಒಂದೇ PDF ಆಗಿ ಸಂಯೋಜಿಸಿ
ಮೇಲೆ ಸಿದ್ಧಪಡಿಸಿದ ಎಲ್ಲಾ ದಾಖಲೆಗಳನ್ನು (ಅರ್ಜಿ ಫಾರ್ಮ್, ರಶೀದಿ, ಶೈಕ್ಷಣಿಕ ದಾಖಲೆಗಳು) ಒಂದೇ ಒಂದು PDF ಫೈಲ್‌ಗೆ ಕ್ರಮಬದ್ಧವಾಗಿ ಜೋಡಿಸಿ. ಫೈಲ್ ಅನ್ನು “ನಿಮ್ಮಹೆಸರು_ಪೋಸ್ಟ್ಕೋಡ್” (ಉದಾ: ರಾಜೇಶ_FN.pdf) ಎಂದು ಹೆಸರಿಸಿ.
ಹಂತ 5: ಇಮೇಲ್ ಮೂಲಕ ಅರ್ಜಿ ಸಲ್ಲಿಸಿ
ಸಿದ್ಧಪಡಿಸಿದ PDF ಫೈಲ್‌ನ್ನ KPCL ನಿಗಮದ ಇಮೇಲ್ ವಿಳಾಸಕ್ಕೆ ಸೆಂಡ್ ಮಾಡಿ.
ಇಮೇಲ್ ವಿಳಾಸ: kpclbacklog@gmail.com
ಇಮೇಲ್ ವಿಷಯ (Subject): ನೀವು ಅರ್ಜಿ ಸಲ್ಲಿಸುವ ಹುದ್ದೆಯ ಪೋಸ್ಟ್ ಕೋಡ್ ಮತ್ತು ಹೆಸರು ಖಂಡಿತ ಹಾಕಿ.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:-
| ಅಧಿಸೂಚನೆ ದಿನಾಂಕ | 27 ನವೆಂಬರ್ 2025 |
| ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 27 ನವೆಂಬರ್ 2025 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 26 ಡಿಸೆಂಬರ್ 2025 (ಸಂಜೆ 5:00) |
ಅರ್ಜಿ ಸಲ್ಲಿಸಲು ಪ್ರಮುಖ ಲಿಂಕುಗಳು :-
| ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ ಅರ್ಜಿ | ಇಲ್ಲಿ ಕ್ಲಿಕ್ ಮಾಡಿ |
ತೀರ್ಮಾನ :-
ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಮೇಲೆ ತಿಳಿಸಿರುವ ಎಲ್ಲಾ ಮಾಹಿತಿ ಹಾಗೂ ದಾಖಲೆಗಳೊಂದಿಗೆ ಆಫ್ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸುವ ವಿಳಾಸ ಈ ಮೇಲೆ ತಿಳಿಸಲಾಗಿದೆ ಆ ವಿಳಾಸಕ್ಕೆ ನಿಗದಿತ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಿ.

